ಬಿ ಬಿ ಎಂ ಪಿ ಚುನಾವಣೆ ಯಾವಾಗ ???
ಅದೊಂದು ಕಾಲ ಇತ್ತು ಕಿವಿಗೆ ಹೆಡ್ ಫೋನ್ ಹಾಕೊಂಡು,ಹೆಲ್ಮೆಟ್ ಧರಿಸಿ ಬೆಂಗಳೂರಿನ ಅರೆ ಚಳಿ ವಾತಾವರಣದಲ್ಲಿ ನಿರಾತಂಕವಾಗಿ ೩೦-೪೦ ಕಿ.ಮಿ ವೇಗದಲ್ಲಿ ಯಾವುದೆ ಅಡೆ ತಡೆ ಇಲ್ಲದೆ ಸಮಯಕ್ಕೆ ಸರಿಯಾಗಿ ಆಫಿಸ್ ಸೆರುತಿದ್ದ ಕಾಲ. ಪ್ರಸ್ತುತವಾಗಿ ಭಾ.ಜ.ಪಾ ಸರಕಾರದಲ್ಲಿ ಅದು ಜನಸಾಮಾನ್ಯರ ನೆನಪಿನ ಪುಟಗಳಿಗೆ ಸೇರಿದೆ ಪ್ರಸ್ತುತ ಆಡಳಿತ ಸರಕಾರದಲ್ಲಿ ಮತದಾರ ಗಾಡಿ ಬಿಡಿ ನೆಮ್ಮದಿಯಾಗಿ ಕಾಲುದಾರಿಯಾಲ್ಲಿ ನಡೆದುಕೊಂಡು ಹೊಗುವುದೆ ಒಂದು ಆಕ್ಷನ್ ಚಲನ ಚಿತ್ರದಲ್ಲಿ ನಟಿಸಿದಂತಹ ಅನುಭವ ನೀಡುತ್ತಿದೆ
೨೦೨೦ ಆರಂಭದಲ್ಲಿ ನಡೆಯಬೇಕಿದ್ದ ಬಿಬಿಎಂಪಿ ಚುನಾವಣೆ ಎರಡು ವರುಷವಾದರು ಖಾಲಿ ಬಿದ್ದಿದೆ ಇದು ಆಡಳಿತ ಸರಕಾರದ ವೈಫಲ್ಯ , ಅಸಡ್ಡೆ ತೊರುತ್ತದೆ ಇನ್ನ ನಾಮಕಾವಸ್ತೆಗೆ ಇರೊ ವಿರೊಧ ಪಕ್ಷಗಳು ಇದರ ಬಗ್ಗೆ ಕಳೆದ ಎರಡು ಅಧಿವೆಶಣಗಳಲ್ಲಿ ಮಾತಾಡದೆ ಇರುವುದು ರಾಷ್ಟ್ರೀಯ ಪಕ್ಷಗಳ ವಸಾಹುತ ಧೋರಣೆಗೆ ಸಾಕ್ಷಿಯಾಗಿದೆ.
ಇನ್ನ ಜನಸಾಮಾನ್ಯರಿಗಂತು ತಿಂಗಳಿಗೆ ಎರಡು ಬಾರಿ ನಾಮಕಾವಸ್ತೆಗೆ ನಡೆಯೊ ವಾರ್ಡ್ ಮಿಟಿಂಗ್ ಅಲ್ಲಿನ ಎ ಇಇ , ನೊಡಲ್ ಅಧಿಕಾರಿಗಳ ದುರಹಂಕಾರದ ಮಾತುಗಳು ತಮ್ಮ ಸಮಸ್ಯೆಗಳಿಗೆ ಸಿಗದ ಪರಿಹಾರದಿಂದ ವ್ಯವಸ್ಥೆ ಮೆಲೆ ನಿರಾಸೆ ಹೊಂದಿದ್ದಾರೆ ಸಾಲಾದಕ್ಕೆ ಬಿಬಿಎಂಪಿ ೧೯೮ ರಿಂದ ೨೨೫ಕ್ಕೆ ವಾರ್ಡ್ ಗಳ ಸಂಖ್ಯೆ ಹೆಚ್ಚಿಸುವಂತಹ ಅವೈಜ್ಞಾನಿಕ ನಿರ್ಧಾರಕ್ಕೆ ಮುಂದಾಗಿದೆ. ಇಗಾಗಲೆ ಗ್ರಾಮ ಸಭಾ ವ್ಯಾಪ್ತಿಗೆ ಬಂದಿದ್ದ ಹಳ್ಳಿಗಳನ್ನ ಹೊಸದಾಗಿ ಬಿಬಿಎಂಪಿ ಸೆರಿಸಿ ೧೦ ವರುಷಗಳೆ ಕಳೆದರು ಕನಿಷ್ಟ ಸೌಕರ್ಯಗಳನ್ನ ಒದಗಿಸಲು ಸಾಧ್ಯವಾಗಿಲ್ಲ. ಇನ್ನ ಬೆಡದ ಕಾರ್ಯಯೊಜನೆಗಳನ್ನ ಕೈಗೆತ್ತಿಕೋಂಡಿದೆ. ವಿಸ್ತಿರಣಕ್ಕೆ ಈಗಿರೊ ಸಮಸ್ಯೆಗಳನ್ನ ಮರೆಮಾಚಲು, ಹೆಚ್ಚು ತೆರಿಗೆ ವಸುಲಿ ಮಾಡಲು ವಿಸ್ತಿರ್ಣ ಒಂದು ಅಸ್ತ್ರವೇ?
ಈ ಹಿಂದೆ ಸುಂದರ ನಗರಿ ಪರಿಕಲ್ಪನೆಯಲ್ಲಿ, ದೊಡ್ಡ ದೊಡ್ಡ ಬ್ಯಾನರ್ ಫ್ಲೆಕ್ಸ್ ನಿಷೇಧಿಸಿದ್ದ ಹೈ ಕೊರ್ಟು ನ್ಯಾಯಲಯದ ಅಧಿನಿಯಮಗಳನ್ನೆ ಗಾಳಿಗೆ ತುರಿ ಫ್ಲೆಕ್ಸ್ ಗಳು ಪುನಃ ರಾರಾಜಿಸುತ್ತಿವೆ,ಟೆಂಡರ್ ರಸ್ತೆಗಳ ಬದಿ ಸೈಕಲ್ ಟ್ರಕ್ ರಸ್ತೆ ಉದ್ಘಾಟನೆಗೊಂಡು ವಾರದ ಮುಂಚೆಯೇ ಕಿತ್ತುಹೋಗುತ್ತಿದೆ, ಇನ್ನ ವಲಸಿಗರ ಹಿತಾಸಕ್ತಿಗಳಿಗೆ ಸರಿ ಹೊಂದುವಂತೆ ಮಹಾವೀರ ಜಯಂತಿ,ಹಲವು ಜೈನ ಹಾಗು ಬನಿಯ ಹಬ್ಬಗಳ ಪ್ರಯುಕ್ತ ಮಾಂಸ ಮಾರಾಟ ನಿಷೇಧ ಅದು ಅಂಗಡಿಯ ವ್ಯಾಪಾರಿಗಳ ಅಭಿಮತ ಪಡೆಯದೆ ವ್ಯಾಪರವನ್ನು ನಿಷೆಧಿಸಿದ್ದು ಉಂಟು ಇದರಿಂದ ಸಾವಿರಾರು ಕೋಟಿ ನಷ್ಟ ಉಂಟಾಗಿದೆ. ಮುಂದೆ ಇಂತಹ ಅಯೊಗ್ಯ ನಿರ್ಧಾರಗಳೂ, ಬೆಳವಣಿಗೆಗಳು ತಡೆಯುವಂತಹ ಒಂದು ಪ್ರಜಾ ವ್ಯವಸ್ಥೆ ಅತ್ಯಗತ್ಯ.
Comments
Post a Comment