ಗಡಿಕೇಶ್ವರದಲ್ಲಿ ಸತತ ಭೂಕಂಪ ನಿರ್ಲಕ್ಷ್ಯ ತೋರಿದ ಆಡಳಿತ ಸರ್ಕಾರ
ಕರ್ನಾಟಕ ದೇಶದ ಕಲ್ಯಾಣ ಕರ್ನಾಟಕ ಭಾಗದಲ್ಲಿರೊ ಕಲಬುರ್ಗಿ ಚಿಂಚೋಳ್ಳಿ ತಾಲೂಕು ಗಡಿಕೇಶ್ವರದಲ್ಲಿ ನಿನ್ನೆ 12/10/21 ರಂದು ರಿಕ್ಟರ್ 2.1 ಮಾಪನದಲ್ಲಿ
ಭುಕಂಪ ಸಂಭವಿಸಿದೆ..
ಈ ಭೂಕಂಪ ಮೊದಲೇನಲ್ಲ ಬದಲಾಗಿ ಹಲವಾರು ಬಾರಿ ಬಂದು ಹೋಗಿದೆ ಎಂದು ಸ್ಥಳೀಯರ ವಾದ ಈ ಸಂಬಂಧ ಹಲವಾರು ಬಾರಿ ದೂರು ಕೊಟ್ಟರು ಕಿವಿಗೊಡದ ಕ್ಷೇತ್ರದ ನಾಯಕರು ಸಂಸದರು...
ನಿನ್ನೆ ಬೆಳಿಗ್ಗೆ "ನಾಗರಿಕ ಸಮಿತಿ ಗಡಿಕೇಶ್ವರ"ದ ಯುವಕರು,ಮುಖಂಡರು ಪಕ್ಷಾತೀತವಾಗಿ ಕಲಬುರ್ಗಿ ಮುಖ್ಯರಸ್ತೆ ಹೊಡೆಬಿರಣಹಳ್ಳಿ ಕ್ರಾಸ್ ನಲ್ಲಿ ಪ್ರತಿಭಟಿಸಿದರು.
ಅತಿ ಹೆಚ್ಚು ಸಿಮೆಂಟ್ ತಯಾರಿಸೋ ಕೈಗಾರಿಕ ಘಟಕಗಳನ್ನ ಹೊಂದಿರೋ ಪ್ರದೇಶ ಇದಾಗಿದೆ
ಅಲ್ಲದೆ ಹಲವಾರು ಬಾರಿ ಈ ಪ್ರದೇಶ ಪ್ರವಾಹಕ್ಕೆ ತುತ್ತಾಗಿದೆ...
ಇಂದು 4.1 ರಿಕ್ಟರ್ ಭೂಕಂಪ ದಾಖಲಾಗಿದೆ ಇದರ ಪರಿಣಾಮ 20-30 ಮನೆ ಬಿರುಕು ಬಿಟ್ಟಿವೇ 70-80% ಜನ ಈಗಾಗಲೇ ಉರು ಬಿಟ್ಟಿದ್ದಾರೆ ಸ್ಥಳಕ್ಕೆ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ
Comments
Post a Comment