ತಮಿಳುನಾಡಿಗೆ ಬೆಣ್ಣೆ ಕರ್ನಾಟಕಕ್ಕೆ ಸುಣ್ಣ

ಪ್ರಧಾನಮಂತ್ರಿ ಮೋದಿ ಅವರು ಇಂದು ತಮಿಳುನಾಡಿನಲ್ಲಿ 11 ವೈದ್ಯಕೀಯ ಕಾಲೇಜುಗಳನ್ನು ಹಾಗೂ ತಮಿಳು ಭಾಷೆ ಅಭಿವೃದ್ಧಿಗಾಗಿ ಸ್ಥಾಪಿಸಿರುವ ಕೇಂದ್ರವನ್ನು  ಉದ್ಘಾಟಿಸಲಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯಿಂದ 25 ಸಂಸದರು ಆಯ್ಕೆಯಾಗಿದ್ದಾರೆ ಆದರೆ ತಮಿಳುನಾಡಿನಿಂದ ಇಬ್ಬರು ಬಿಜೆಪಿ ಸಂಸದರು ಇಲ್ಲ ಆದರೂ ಸಹ ತಮಿಳುನಾಡಿನ ಹಾಗೂ ತಮಿಳು ಭಾಷೆಯ ಅಭಿವೃದ್ಧಿಗಾಗಿ ಕೇಂದ್ರದಿಂದ ಕೋಟ್ಯಾಂತರ ರೂಪಾಯಿ ಹಣ ಬಿಡುಗಡೆಯಾಗುತ್ತದೆ. ಕರ್ನಾಟಕದ ಶಾಸಕರು ಹಾಗೂ ಸಂಸದರು ತಮಿಳು ಭಾಷೆಯ ಅಭಿವೃದ್ಧಿಗೆ ಬಿಡುಗಡೆಯಾದ ಹಣವನ್ನು ನಡೆದ ವಿಚಾರವನ್ನು ತಮ್ಮ ಖಾತೆಗಳಲ್ಲಿ ಅತಿ ಸಂಭ್ರಮದಿಂದ ಹಂಚಿಕೊಳ್ಳುತ್ತಾರೆ ಆದರೆ ಕನ್ನಡದ ಅಭಿವೃದ್ಧಿಗೆ ಕೇಂದ್ರದಿಂದ ಬರಬೇಕಾದ ಹಣದ ವಿಚಾರವಾಗಿ ಇವರುಗಳು ತುಟಿ ಬಿಚ್ಚುವುದಿಲ್ಲ ಇದು ಸಮಸ್ತ ಕನ್ನಡಿಗರಿಗೆ ಮಾಡಿದ ಅವಮಾನವೇ ಸರಿ.
    ಆದರೆ ಕರ್ನಾಟಕದಲ್ಲಿ ಶಾಸ್ತ್ರೀಯ ಸ್ಥಾನಮಾನ ವಿದ್ದರೂ ಕನ್ನಡ ಭಾಷೆಯ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲು ಮೀನಾಮೇಷ ಎಣಿಸುತ್ತಾರೆ. ಗಾಯದ ಮೇಲೆ ಬರೆ ಎಳೆದ ಹಾಗೆ ಕರ್ನಾಟಕಕ್ಕೆ ಸಂಬಂಧವೇ ಇಲ್ಲದ ಕೇವಲ ವಿಶ್ವದಲ್ಲೇ 28 ಸಾವಿರ ಜನರು ಮಾತನಾಡುವ ಸಂಸ್ಕೃತ ಭಾಷೆಗೆ ವಿಶ್ವವಿದ್ಯಾನಿಲಯವನ್ನು ನಮ್ಮ ಮಾಗಡಿಯಲ್ಲಿ  ಸ್ಥಾಪಿಸುವುದಲ್ಲದೆ ಅದಕ್ಕಾಗಿ 350ಕೋಟಿ ಮೀಸಲಿಡುತ್ತಾರೆ ಅದು ರಾಜ್ಯ ಸರ್ಕಾರದ ಬೊಕ್ಕಸದಿಂದ. ಕರ್ನಾಟಕಕ್ಕೆ ಯಾವ ಕೊಡುಗೆಯನ್ನು ನೀಡದೆ ಭಾಷಾ ಸಾಮರಸ್ಯವನ್ನು ಕದಡುವ ಮರಾಠ ಸಮುದಾಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ 50 ಕೋಟಿ ಮೀಸಲಿಡುತ್ತದೆ. ಸರ್ಕಾರದ ಇಂತಹ ನಡೆಗಳು ಸ್ವಾಭಿಮಾನವಿರುವ ಕನ್ನಡಿಗರನ್ನು ಅವಮಾನಿಸಿದಂತೆ.

Comments

Popular posts from this blog

ಬಿ ಬಿ ಎಂ ಪಿ ಚುನಾವಣೆ ಯಾವಾಗ ???

PR ಬೊಮ್ಮಾಯಿಯ ನೂರು ದಿನದ ವೈಫಲ್ಯ ಯಶೋಗಾಥೆ.

ಹೊರರಾಜ್ಯದವರ ಅಕ್ರಮ ಚಟುವಟಿಕೆಗಳಿಗೆ ಕರ್ನಾಟಕ ತಾಣವಾಗುತ್ತಿದೆಯೆ???