PR ಬೊಮ್ಮಾಯಿಯ ನೂರು ದಿನದ ವೈಫಲ್ಯ ಯಶೋಗಾಥೆ.
1.ತಾನು ಯಾರೆಂದು ಗೊತ್ತಿಲ್ಲದ ಕಾರಣ ಜನರ ಮಧ್ಯೆ ಪರಿಚಯಿಸಿಕೊಳ್ಳಲು ನಾಗಪುರ ಪ್ರಾಯೋಜಿತ ಸುದ್ದಿವಾಹಿನಿಗಳಿಗೆ ನಾಟಕೀಯ ಸಂದರ್ಶನ
2.ಮುಖ್ಯಮಂತ್ರಿ ಹುದ್ದೆಗೆ ಕಿಂಚಿತ್ತು ಗೌರವ ಕೊಡದೆ ಕಡೆ ಪಕ್ಷ ಅವರ ತಂದೆ ಗಾಂಧಿವಾದಿ SR ಬೊಮ್ಮಾಯಿ ಅವಮಾನವಾಗುವಂತೆ ಗಾಂಧಿಯನ್ನು ಕೊಂದ RSS ಮುಖ್ಯ ಕಛೇರಿ ಕೇಶವಕೃಪಕ್ಕೆ ಭೇಟಿ ನೀಡಿದ್ದು ಅದು
ಮುಖ್ಯ ಕಾರ್ಯಕ್ರಮಗಳನ್ನ ರದ್ದುಗೊಳಿಸಿ
ಎಲ್ಲ ಕನ್ನಡಿಗರ ಸ್ವಾಭಿಮಾನವನ್ನ ಕೆರಳಿಸಿತು
3.ಮತೀಯ ಗುಂಡಾಗಿರಿಯನ್ನ ಸಮರ್ಥಿಸಿಕೊಂಡು
ಸಾಮರಸ್ಯ ಕರ್ನಾಟಕಕ್ಕೆ ಬೆಂಕಿ ಇಟ್ಟದ್ದು..
4. 100 ದಿನದಲ್ಲಿ ಕನಿಷ್ಠ 10 ಬಾರಿ ಅಥವಾ ಅದಕ್ಕಿಂತ ಹೆಚ್ಚು ಖಾಸಗಿ ಸುದ್ದಿ ಅಥವ ಮನೋರಂಜನಾ ವಾಹಿನಿಗಳ ಸೀರಿಯಲ್, ಸಂಗೀತ ಕಾರ್ಯಕ್ರಮಗಳಿಗೆ ತೆರಳಿ ಜನಗಳಿಗೆ ರಂಜಿಸಿದ್ದು
5. ಸಾವಿರಾರು ಅಭಿವೃದ್ಧಿಗೆ ಸಂಬಂಧಿಸಿದಂತಹ
ಫೈಲ್ಗಳು ರುಜು ಆಗದೆ ಉಳಿದಿದ್ದು ಮುಖ್ಯ ಕೆಲಸಗಳ ನಿರ್ಲಕ್ಷ್ಯ ಮಾಡಿ
Stage Programme ಗಳಲ್ಲಿ ಮಾತ್ರ ಮುಖ್ಯಮಂತ್ರಿ ಪಾತ್ರಕ್ಕೆ ಸೀಮಿತವಾಗಿರುವುದು
6. ಭಾರತ ಸಂವಿಧಾನಕ್ಕೆ ಅವಮಾನವಾಗುವಂತೆ ಒಂದು ಜಾತಿ ಜೊತೆ ತನ್ನನ್ನು ತಾ ಗುರುತಿಸಿಕೊಂಡು ಮಾಜಿ ಮುಖ್ಯಮಂತ್ರಿಯೋರ್ವರ ಜಾತಿ ಕೀಟಲೆ ಮಾಡಿದ್ದು.
7. ಕೆಲವು ದಿನಗಳ ಅಧಿವೇಶನ ನಡೆಸಿ ಸಮಯ ವ್ಯರ್ಥ ಮಾಡುವ ಮಾತುಗಳನ್ನ ಆಡಿ ಜನಪರ ಯೋಜನೆಗಳ ಬಗ್ಗೆ ಚರ್ಚೆ ಮಾಡದೆ, ಒಕ್ಕೂಟ ಸರ್ಕಾರದ ದ್ರೋಹದ ಬಗ್ಗೆ ಚರ್ಚೆಗೆ ಅವಕಾಶ ನೀಡದೆ ಹಾಗು ಬಾಕಿ ಉಳಿದ ಪ್ರಶ್ನೆಗಳಿಗೆ ಉತ್ತರ ನೀಡದೆ
ತಮಗೆ ಬೇಕಾದ ಕಾನೂನುಗಳನ್ನ ರಚಿಸಿಕೊಂಡು ಚರ್ಚೆಯೇ ಇಲ್ಲದೆ ಅನರ್ಥ ಕಾನೂನುಗಳನ್ನು ಜಾರಿಮಾಡಿದ್ದು.
8. ಜನತಾದರ್ಶನವೆಂಬ ಹೆಸರಲ್ಲಿ ಮುಂದೆ ಜನರ ದರ್ಶನಮಾಡಿ ಹಿಂದೆ ಲೋಕೋಪಕಾರಿ ಯೋಜನೆಗಳನ್ನ ಅಂಗವಿಕಲ, ವೃದ್ಧಾಪ್ಯ ವೇತನವನ್ನ ರದ್ದು ಮಾಡಿದ್ದು...
9. ಚಟ್ಟಕ್ಕೆ ಶೂದ್ರ ಪಟ್ಟಕ್ಕೆ ಬ್ರಾಹ್ಮಣವೆಂಬುವಂತೆ
ಸದಶಿವಯ್ಯ ಆಯೋಗ ವರದಿ ಜಾರಿ ಮಾಡದೆ ದಲಿತರ ಅಭಿವೃದ್ಧಿಗೆಂದೆ ಇದ್ದ ಏಕೈಕ ಸಂಶೋಧನ ಕೇಂದ್ರ ದೇವರಾಜು ಅರಸು ಸಂಶೋಧನ ಕೇಂದ್ರವನ್ನ ಮುಚ್ಚಿಹಾಕುವ ನಿರ್ಧಾರ ಕೈಗೊಂಡು
ದಲಿತ ವಿದ್ಯಾರ್ಥಿಗಳಿಗೆ ಬಸ್ ಪಾಸ್, ಲ್ಯಾಪ್ಟಾಪ್ ವಿತರಣೆ ನಿಲ್ಲಿಸಿ.
ಬ್ರಾಹ್ಮಣರಿಗೆ ವಿಶೇಷ ಸವಲತ್ತುಗಳನ್ನ ( ವೃಧಾಪ್ಯ, ವಿಧವ, ias ತರಬೇತಿ) ನೀಡಿದ್ದು...
SR ಬೊಮ್ಮಾಯಿ ತಂದೆ ಒಕ್ಕೂಟ ಸರ್ಕಾರದ ವಿರುದ್ಧ ತೊಡೆ ತಟ್ಟಿ ನಿಂತರು ಈತ ನಡುಬಗ್ಗಿಸಿ ಆಳಾಗಿ ಗುಮಾಸ್ತನಿಗೂ ಅವಮಾನ ಆಗುವಂತೆ ಸರ್ಕಾರ ನಡೆಸುತ್ತಿರುವನು.
ಕರ್ನಾಟಕ ಇಂದು ಅರಾಜಕತೆಯ ಗೂಡಾಗಿದೆ.
Comments
Post a Comment