Posts

Showing posts from October, 2021

ವೊಟ್ ಬ್ಯಾಂಕ್ ಲಾಭಕ್ಕಾಗಿ ಅಲ್ಪಸಂಖ್ಯಾತರ ಮತಗಳನ್ನ ಸ್ವಧರ್ಮಮಿಯರಿಂದಲೆ ಕೃಢಿಕರಣ??

Image
ಪ್ರಸ್ತುತ ಜಾತ್ಯಾತೀತ ಪಕ್ಶಗಳ ಚುನಾವಣ ಕಿತ್ತಾಟ ರಾಜ್ಯದ ಜನತೆಗೆ ಒಳ್ಳೇ ಮನೊರಂಜನೆಯ ವಿಷಯವಾಗಿದೆ ಹೊರತಾಗಿ ಆಯಾ ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯಗಳು ಹಾಗು ಉಪಚುನಾವಣೆ ಎದಿರುಸುತ್ತಿರುವ ಜನತೆಗೆ ಇದರಿಂದಾಗಿ ಎಳ್ಳಷ್ಟು ಲಾಭವಿಲ್ಲವೆಂಬುದು ಕ್ಷೇತ್ರ ಜನರ ಒಮ್ಮತವಾಗಿದೆ.  ಮಾಜಿ ಮುಖ್ಯಮಂತ್ರಿಗಳು ಹಾಗು ಸಚಿವರಿಬ್ಬರ ಚುನಾವಣೆ ಪ್ರಚಾರದ ನೆವದಲ್ಲಿ ಅಲ್ಪಸಂಖ್ಯಾತ ಮತದಾರರ ಹೆಸರಲ್ಲಿ ವೈಕ್ತಿಕ ಕಿತ್ತಾಟ ನೈತಿಕ ದಿವಾಳಿಗೆ ಸಾಕ್ಷಿಯಾಗಿದೆ. ಇಲ್ಲಿ ಅಲ್ಪಸಂಖ್ಯಾತ ಮತಬಾಂಧವರು ಮುಖ್ಯವಾಗಿ ಗಮನಿಸಬೇಕಾದ್ದು ಬಹಳಷ್ಟಿದೆ.   ಸ್ವಾತಂತ್ರ ಬಂದು ೭೫ ವರ್ಷ ಕಳೆದರು ಬಹಳಷ್ಟು ಜನ ಅಲ್ಪಸಂಖ್ಯಾತರು ನಗರವಾಸಿಗಳಾಗಿದ್ದರು ಬಹಳಷ್ಟು ಅಲ್ಪಸಂಖ್ಯಾತರು ಮಧ್ಯಮ ವರ್ಗಕ್ಕೆ  ಎರಲು ಇಂದಿಗು ಸಹ ಸಾಧ್ಯವಾಗಿಲ್ಲ.. ಕಾಂಗ್ರೆಸ್ ಈ ದೆಸವನ್ನ ಬಹಳಷ್ಟು ಬಾರಿ ಈ ಸಮುದಾಯವನ್ನ ಮುಂದೆ ಇಟ್ಕೊಂಡು ಆಡಳಿತ ಮಾಡಿದ್ದು ಬಿಟ್ಟರೆ ಅವರನ್ನ ಬಡತನ ರೇಖೆಯಿಂದ ಮೆಲೆತ್ತಲು ಯಾವುದೆ ಬಲಿಷ್ಠವಾದ ನೀತಿ ರಚಿಸದೆ ಇರುವುದು ಸುಸ್ಪಷ್ಟವಾಗಿದೆ…ಅಸಲಿಗೆ ಜಾತ್ಯಾತೀತ ಜನತಾದಳ, ಕಾಂಗ್ರೆಸ , ಬದಲಾಗಿ ಎ.ಐ.ಎಮ್.ಎಮ್ ಎಸ.ಡಿ.ಪಿ,ಐ ಅಲ್ಪಸಂಖ್ಯಾತ ಬಂಧವರಿಗೆ ಒಳ್ಳೆ ಆಯ್ಕೆಯೆ ? ಎಂಬ ಪ್ರಶ್ನೆಗೆ   ಇದು ಒಂದು ಸಣ್ಣ ವಿಮರ್ಶೆ ಮುಖ್ಯವಾಗಿ ಹೊಸದಾಗಿ ಮುನ್ನೆಲೆಗೆ ಬರುತ್ತಿರುವ ಅಲ್ಪಸಂಖ್ಯಾತ ಪಕ್ಶಗಳು ಮುಯ್ಯಿಗೆ ಮುಯ್ಯಿ ಎಂಬಂತೆ ಹುಟ್ಟಿಕಂಡ

ಗಡಿಕೇಶ್ವರದಲ್ಲಿ ಸತತ ಭೂಕಂಪ ನಿರ್ಲಕ್ಷ್ಯ ತೋರಿದ ಆಡಳಿತ ಸರ್ಕಾರ

Image
ಕರ್ನಾಟಕ ದೇಶದ ಕಲ್ಯಾಣ ಕರ್ನಾಟಕ ಭಾಗದಲ್ಲಿರೊ ಕಲಬುರ್ಗಿ ಚಿಂಚೋಳ್ಳಿ ತಾಲೂಕು ಗಡಿಕೇಶ್ವರದಲ್ಲಿ ನಿನ್ನೆ 12/10/21 ರಂದು ರಿಕ್ಟರ್ 2.1 ಮಾಪನದಲ್ಲಿ  ಭುಕಂಪ ಸಂಭವಿಸಿದೆ..  ಈ ಭೂಕಂಪ ಮೊದಲೇನಲ್ಲ ಬದಲಾಗಿ ಹಲವಾರು ಬಾರಿ ಬಂದು ಹೋಗಿದೆ ಎಂದು ಸ್ಥಳೀಯರ ವಾದ ಈ ಸಂಬಂಧ ಹಲವಾರು ಬಾರಿ ದೂರು ಕೊಟ್ಟರು ಕಿವಿಗೊಡದ ಕ್ಷೇತ್ರದ ನಾಯಕರು ಸಂಸದರು...  ನಿನ್ನೆ ಬೆಳಿಗ್ಗೆ  "ನಾಗರಿಕ ಸಮಿತಿ ಗಡಿಕೇಶ್ವರ"ದ ಯುವಕರು,ಮುಖಂಡರು ಪಕ್ಷಾತೀತವಾಗಿ ಕಲಬುರ್ಗಿ ಮುಖ್ಯರಸ್ತೆ ಹೊಡೆಬಿರಣಹಳ್ಳಿ ಕ್ರಾಸ್ ನಲ್ಲಿ ಪ್ರತಿಭಟಿಸಿದರು. ಅತಿ ಹೆಚ್ಚು ಸಿಮೆಂಟ್ ತಯಾರಿಸೋ ಕೈಗಾರಿಕ ಘಟಕಗಳನ್ನ ಹೊಂದಿರೋ ಪ್ರದೇಶ ಇದಾಗಿದೆ ಅಲ್ಲದೆ ಹಲವಾರು ಬಾರಿ ಈ ಪ್ರದೇಶ ಪ್ರವಾಹಕ್ಕೆ ತುತ್ತಾಗಿದೆ...  ಇಂದು 4.1 ರಿಕ್ಟರ್ ಭೂಕಂಪ ದಾಖಲಾಗಿದೆ ಇದರ ಪರಿಣಾಮ 20-30 ಮನೆ ಬಿರುಕು ಬಿಟ್ಟಿವೇ 70-80% ಜನ ಈಗಾಗಲೇ ಉರು ಬಿಟ್ಟಿದ್ದಾರೆ  ಸ್ಥಳಕ್ಕೆ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ

ಜಾಗತಿಕ ಇಂಧನ ಬಿಕ್ಕಟ್ಟಿನಿಂದ ಕರ್ನಾಟಕಕ್ಕೆ ತೊಂದರೆ ಆಗಲಿದೆಯೇ? ಒಕ್ಕೂಟ ಸರ್ಕಾರ ಮತ್ತೆ ಸವತಿ ನಡೆ ತೋರಲಿದೆಯೇ?

ಕಳೆದ ಒಂದುತಿಂಗಳಿನಿಂದ ಅತ್ಯಾಧುನಿಕ ಒಕ್ಕೂಟವಾದ ಐರೋಪು , ಕೈಗಾರಿಕ ಉತ್ಪಾದನವಾದ ಚೀನಾ ಸಾಕಷ್ಟು ಇಂಧನ ಬಿಕ್ಕಟ್ಟಿಗೆ ತುತ್ತಾಗಿದೆ... ಇನ್ನ ಭಾರತದಲ್ಲಂತೂ ಹಲವಾರು ಕಡೆ ಹೆಚ್ಚು ಮಳೆಯಾದ ಪರಿಣಾಮ ಕಲ್ಲಿದ್ದಲು ಪೂರೈಕೆಯಲ್ಲೂ ವ್ಯತ್ಯಯ ಆಗಲಿದೆ ಎಂದು ತಜ್ಞರ ವಾದ. ಐರೋಪು ರಾಷ್ಟಗಳ ನಾಗರಿಕರ ಬಾಳು ಹೇಳ ತೀರದಾಗಿದೆ  ಕೊರೊನ 2,3 ನೆ ಅಲೆಯಿಂದ ಚೇತರಿಕೆ ಕಾಣುವ ಮುನ್ನವೇ ಈ ರೀತಿಯ ಬಿಕ್ಕಟ್ಟಿಗೆ ತುತ್ತಾಗಿದ್ದಾರೆ.ಇವೆಲ್ಲ ಸಾಲದಕ್ಕೆ ಈ ದೇಶಗಳಲ್ಲಿ ಓಂದು ವರ್ಷದಿಂದ ಅನಿಲದ ಬೆಲೆ 50% ಹೆಚ್ಚಳಗೊಂಡಿದೆ.  ಈ ಅನಿಲದ  ಬೆಳೆಯೇರಿಕೆಯಿಂದ ಇಂತಹ ಚಳಿಗಾಲದಲ್ಲೂ ತಮ್ಮ  ಮನೆಯಲ್ಲಿ  ಬೆಚ್ಚಗಿರಲು ಉಪಯೋಗಿಸುವ ಯಂತ್ರಕ್ಕೂ ಇಂಧನ ಇಲ್ಲದಂತಾಗಿದೆ. ಇನ್ನ ಚೀನಾದಲ್ಲಂತೂ ತಮ್ಮ emission goals ತಲುಪಲು ಹಲವಾರು ಕೈಗಾರಿಕ ಉತ್ಪಾದಕ ಪ್ರದೇಶಗಳನ್ನ ಮುಚ್ಚಲಾಗಿದೆ... (ಹಾಲಿನಿಂದ ಸ್ಟೀಲ್ plant ವರೆಗು). ಇನ್ನ ಅದರ ಹಲವು ಪ್ರಾಂತ್ಯಗಳಲ್ಲಂತು ರಾತ್ರಿ ಸಮಯದಲ್ಲಿ ಮಾತ್ರ ವಿದ್ಯುತ್ ಉಪಯೋಗಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಇತ್ತ ಕರ್ನಾಟಕದಲ್ಲಿ ಅತಿ ಹೆಚ್ಚು ವಿದ್ಯುತ್ಶಕ್ತಿ ಉತ್ಪಾದನೆ  ಆಗ್ತಿರೋದು ಉಷ್ಣ ವಿದ್ಯುತ್ ಸ್ಥಾವರಗಳಿಂದ.... (5020 MW)  ಜಲಶಕ್ತಿ....(3798MW)  ಸೌರ(7369 MW) ಹಾಗು ವಾಯು(4897MW) ಇತ್ಯಾದಿಯಾಗಿ..... ಕೈಗಾರಿಕಾ ಘಟಕಗಳು ಉಷ್ಣ ವಿದ್ಯುತ್ ಸ್ಥಾವರಗಳ ಮೇಲೆ ಅವಲಂಬಿತವಾಗಿದೆ. ಈಗಷ್ಟೇ ಆರ್ಥಿಕ ಚೇತರಿಕೆ ಕಾಣುತ್ತಿರುವ