ವೊಟ್ ಬ್ಯಾಂಕ್ ಲಾಭಕ್ಕಾಗಿ ಅಲ್ಪಸಂಖ್ಯಾತರ ಮತಗಳನ್ನ ಸ್ವಧರ್ಮಮಿಯರಿಂದಲೆ ಕೃಢಿಕರಣ??


ಪ್ರಸ್ತುತ ಜಾತ್ಯಾತೀತ ಪಕ್ಶಗಳ ಚುನಾವಣ ಕಿತ್ತಾಟ ರಾಜ್ಯದ ಜನತೆಗೆ ಒಳ್ಳೇ ಮನೊರಂಜನೆಯ ವಿಷಯವಾಗಿದೆ ಹೊರತಾಗಿ ಆಯಾ ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯಗಳು ಹಾಗು ಉಪಚುನಾವಣೆ ಎದಿರುಸುತ್ತಿರುವ ಜನತೆಗೆ ಇದರಿಂದಾಗಿ ಎಳ್ಳಷ್ಟು ಲಾಭವಿಲ್ಲವೆಂಬುದು ಕ್ಷೇತ್ರ ಜನರ ಒಮ್ಮತವಾಗಿದೆ. 
ಮಾಜಿ ಮುಖ್ಯಮಂತ್ರಿಗಳು ಹಾಗು ಸಚಿವರಿಬ್ಬರ ಚುನಾವಣೆ ಪ್ರಚಾರದ ನೆವದಲ್ಲಿ ಅಲ್ಪಸಂಖ್ಯಾತ ಮತದಾರರ ಹೆಸರಲ್ಲಿ ವೈಕ್ತಿಕ ಕಿತ್ತಾಟ ನೈತಿಕ ದಿವಾಳಿಗೆ ಸಾಕ್ಷಿಯಾಗಿದೆ.
ಇಲ್ಲಿ ಅಲ್ಪಸಂಖ್ಯಾತ ಮತಬಾಂಧವರು ಮುಖ್ಯವಾಗಿ ಗಮನಿಸಬೇಕಾದ್ದು ಬಹಳಷ್ಟಿದೆ. 

 ಸ್ವಾತಂತ್ರ ಬಂದು ೭೫ ವರ್ಷ ಕಳೆದರು ಬಹಳಷ್ಟು ಜನ ಅಲ್ಪಸಂಖ್ಯಾತರು ನಗರವಾಸಿಗಳಾಗಿದ್ದರು
ಬಹಳಷ್ಟು ಅಲ್ಪಸಂಖ್ಯಾತರು ಮಧ್ಯಮ ವರ್ಗಕ್ಕೆ  ಎರಲು ಇಂದಿಗು ಸಹ ಸಾಧ್ಯವಾಗಿಲ್ಲ..

ಕಾಂಗ್ರೆಸ್ ಈ ದೆಸವನ್ನ ಬಹಳಷ್ಟು ಬಾರಿ ಈ ಸಮುದಾಯವನ್ನ ಮುಂದೆ ಇಟ್ಕೊಂಡು ಆಡಳಿತ ಮಾಡಿದ್ದು ಬಿಟ್ಟರೆ ಅವರನ್ನ ಬಡತನ ರೇಖೆಯಿಂದ ಮೆಲೆತ್ತಲು ಯಾವುದೆ ಬಲಿಷ್ಠವಾದ ನೀತಿ ರಚಿಸದೆ ಇರುವುದು ಸುಸ್ಪಷ್ಟವಾಗಿದೆ…ಅಸಲಿಗೆ ಜಾತ್ಯಾತೀತ ಜನತಾದಳ, ಕಾಂಗ್ರೆಸ , ಬದಲಾಗಿ ಎ.ಐ.ಎಮ್.ಎಮ್ ಎಸ.ಡಿ.ಪಿ,ಐ ಅಲ್ಪಸಂಖ್ಯಾತ ಬಂಧವರಿಗೆ ಒಳ್ಳೆ ಆಯ್ಕೆಯೆ ? ಎಂಬ ಪ್ರಶ್ನೆಗೆ   ಇದು ಒಂದು ಸಣ್ಣ ವಿಮರ್ಶೆ

ಮುಖ್ಯವಾಗಿ ಹೊಸದಾಗಿ ಮುನ್ನೆಲೆಗೆ ಬರುತ್ತಿರುವ ಅಲ್ಪಸಂಖ್ಯಾತ ಪಕ್ಶಗಳು ಮುಯ್ಯಿಗೆ ಮುಯ್ಯಿ ಎಂಬಂತೆ ಹುಟ್ಟಿಕಂಡಿರೊ ಪಕ್ಷಗಳೆ ಹೊರತು ಇವರಿಗೆ ಅಲ್ಪಸಂಖ್ಯಾತರ ಉದ್ದಾರ ಮಾಡೊ ಯಾವ ಅಲೊಚನೆ ಕೂಡ ಇಲ್ಲ….

ಹೈದೆರಾಬಾದ್ ನ ಎ.ಐ.ಎಮ್.ಎಮ್ ಇಷ್ಟು ವರ್ಶದ ತಮ್ಮ ಆಡಳಿತದಲ್ಲಿ ತಮ್ಮ ವ್ಯಾಪಾರ ಹಾಗು ತಮ್ಮ ಕುಟುಂಬದ ಜನ ಅರ್ಥಿಕವಾಗಿ ಮುಂದುವರೆದದ್ದು ಬಿಟ್ಟರೆ ಯಾವುದೆ ರೀತಿಯಲ್ಲು ಸ್ಥಳಿಯ ಮುಸಲ್ಮಾನರು ಸಾಮಾಜಿಕವಾಗಿ, ಆರ್ಥಿಕವಾಗಿ ಬೆಳೆದದ್ದು ನಾ ಕಂಡಿಲ್ಲ . ಇನ್ನ ರಾಜಕಿಯವಂತು ದೂರದ ಮಾತು. ಇನ್ನ ಬೆರೆ ಪಕ್ಶಗಳು ನೇರವಾಗಿ ಸಂಘ ಪರಿವಾರವನ್ನ ಟೀಕೆಗೆ ಮಾತ್ರ ಸೀಮಿತವಾಗಿದೆ ವಿನಹ… ಅಲ್ಪಸಂಖ್ಯಾತ ಬಾಂಧವರ ಏಳಿಗೆಗ ಬೇಕಾದ ಕಾರ್ಯಯೊಜನೆ ಹೊಂದಿರೊ ಒಂದು ಪಕ್ಶವನ್ನು ನಾ ಕಂಡಿಲ್ಲ

Jds ಕೋಮು ಪರಿವಾರದೊಂದಿಗೆ ಮಾಡಿ ಕೊಂಡ ಅಪವಿತ್ರ ಮೈತ್ರಿ ಗೊತ್ತೇ ಇದೆ 

ಕುತಂತ್ರಿ  ಕಾಂಗ್ರೆಸ್ ಪ್ರತಿ ಬಾರಿ ಮುಸಾಲ್ಮಾನರನ್ನ ಮುಂದೆ ಇಟ್ಟುಕೊಂಡು ವಖ್ತ್ ಜಮಿನನ್ನ ಆಕ್ರಮಿಸಿದ್ದು ಆ ಅಲಾಹುವಿಗೆ ಹಾಗು ಅತನ ಆರಾಧಕರಿಗೆ ಗೊತ್ತಿಲ್ಲದ ಸಂಗತಿಯೆನಲ್ಲ….
ಕಾಂಗ್ರೆಸ್  ಮುಸಲ್ಮಾನರಿಗೆ ಮಾಡಿದಷ್ಟು ಅವಮಾನ, ಮೊಸ ಯಾರು ಮಾಡಿರಲಿಕ್ಕೆ ಸಾಧ್ಯವು ಇಲ್ಲ.
ಅದೆ ಹಾದಿಯಲ್ಲೆ ಇಂದಿನ ಆಧುನಿಕ ಅಲ್ಪಸಂಖ್ಯಾತ ಪಕ್ಷಗಳು ಹಿಂಬಾಲಿಸುತ್ತಿದೆ ಆದರೆ ಮುಸಲ್ಮಾನ ಇನ್ನು ಮೋಸಹೊಗುತ್ತಲೆ ಇದಾನೆ…

ಮುಸಲ್ಮಾನರಿಗೆ ಬಡತನ ರೇಖೆಯಿಂದ ಮೇಲೆ ಬರಲು 
ಒಂದು ಬಲಿಷ್ಠ ಆರ್ಥಿಕ ಸಾಮಾಜಿಕ ನೀತಿ ಅತ್ಯಂತ ಅನಿವಾರ್ಯವಾಗಿದೆ.

ಕಷ್ಟದಲ್ಲಿ ಯಾರು ತನ್ನ ಸಹೋದರರ ಏಳಿಗೆಗೆ ಸಹಾಯ ಮಾಡುತ್ತಾರೋ ಆ ಅಲ್ಲಾಹ್ ಅವರ ಕಷ್ಟದ ಸಮಯದಲ್ಲಿ ಅವರಿಗೆ ಸಹಾಯ ಮಾಡುತ್ತಾರೆ 
 
-ಪ್ರವಾದಿ ಮೊಹಮ್ಮದ್ ಪೈಗಂಬರ (ಸಾ.ಅ)

ಇದಕ್ಕೆ ಜನರೇ ಮುಂದು ಬರಬೇಕು...

Comments

Popular posts from this blog

ಬಿ ಬಿ ಎಂ ಪಿ ಚುನಾವಣೆ ಯಾವಾಗ ???

PR ಬೊಮ್ಮಾಯಿಯ ನೂರು ದಿನದ ವೈಫಲ್ಯ ಯಶೋಗಾಥೆ.

ಹೊರರಾಜ್ಯದವರ ಅಕ್ರಮ ಚಟುವಟಿಕೆಗಳಿಗೆ ಕರ್ನಾಟಕ ತಾಣವಾಗುತ್ತಿದೆಯೆ???