ಜಾಗತಿಕ ಇಂಧನ ಬಿಕ್ಕಟ್ಟಿನಿಂದ ಕರ್ನಾಟಕಕ್ಕೆ ತೊಂದರೆ ಆಗಲಿದೆಯೇ? ಒಕ್ಕೂಟ ಸರ್ಕಾರ ಮತ್ತೆ ಸವತಿ ನಡೆ ತೋರಲಿದೆಯೇ?

ಕಳೆದ ಒಂದುತಿಂಗಳಿನಿಂದ ಅತ್ಯಾಧುನಿಕ ಒಕ್ಕೂಟವಾದ ಐರೋಪು , ಕೈಗಾರಿಕ ಉತ್ಪಾದನವಾದ ಚೀನಾ ಸಾಕಷ್ಟು ಇಂಧನ ಬಿಕ್ಕಟ್ಟಿಗೆ ತುತ್ತಾಗಿದೆ...
ಇನ್ನ ಭಾರತದಲ್ಲಂತೂ ಹಲವಾರು ಕಡೆ ಹೆಚ್ಚು ಮಳೆಯಾದ ಪರಿಣಾಮ ಕಲ್ಲಿದ್ದಲು ಪೂರೈಕೆಯಲ್ಲೂ ವ್ಯತ್ಯಯ ಆಗಲಿದೆ ಎಂದು ತಜ್ಞರ ವಾದ.

ಐರೋಪು ರಾಷ್ಟಗಳ ನಾಗರಿಕರ ಬಾಳು ಹೇಳ ತೀರದಾಗಿದೆ
 ಕೊರೊನ 2,3 ನೆ ಅಲೆಯಿಂದ ಚೇತರಿಕೆ ಕಾಣುವ ಮುನ್ನವೇ ಈ ರೀತಿಯ ಬಿಕ್ಕಟ್ಟಿಗೆ ತುತ್ತಾಗಿದ್ದಾರೆ.ಇವೆಲ್ಲ ಸಾಲದಕ್ಕೆ ಈ ದೇಶಗಳಲ್ಲಿ ಓಂದು ವರ್ಷದಿಂದ ಅನಿಲದ ಬೆಲೆ 50% ಹೆಚ್ಚಳಗೊಂಡಿದೆ. 
ಈ ಅನಿಲದ  ಬೆಳೆಯೇರಿಕೆಯಿಂದ ಇಂತಹ ಚಳಿಗಾಲದಲ್ಲೂ ತಮ್ಮ  ಮನೆಯಲ್ಲಿ  ಬೆಚ್ಚಗಿರಲು ಉಪಯೋಗಿಸುವ ಯಂತ್ರಕ್ಕೂ ಇಂಧನ ಇಲ್ಲದಂತಾಗಿದೆ.

ಇನ್ನ ಚೀನಾದಲ್ಲಂತೂ ತಮ್ಮ emission goals ತಲುಪಲು ಹಲವಾರು ಕೈಗಾರಿಕ ಉತ್ಪಾದಕ ಪ್ರದೇಶಗಳನ್ನ ಮುಚ್ಚಲಾಗಿದೆ... (ಹಾಲಿನಿಂದ ಸ್ಟೀಲ್ plant ವರೆಗು).
ಇನ್ನ ಅದರ ಹಲವು ಪ್ರಾಂತ್ಯಗಳಲ್ಲಂತು ರಾತ್ರಿ ಸಮಯದಲ್ಲಿ ಮಾತ್ರ ವಿದ್ಯುತ್ ಉಪಯೋಗಿಸಲು ಅವಕಾಶ ಮಾಡಿಕೊಟ್ಟಿದ್ದಾರೆ

ಇತ್ತ ಕರ್ನಾಟಕದಲ್ಲಿ ಅತಿ ಹೆಚ್ಚು ವಿದ್ಯುತ್ಶಕ್ತಿ ಉತ್ಪಾದನೆ  ಆಗ್ತಿರೋದು ಉಷ್ಣ ವಿದ್ಯುತ್ ಸ್ಥಾವರಗಳಿಂದ.... (5020 MW)
 ಜಲಶಕ್ತಿ....(3798MW)
 ಸೌರ(7369 MW) ಹಾಗು ವಾಯು(4897MW) ಇತ್ಯಾದಿಯಾಗಿ.....
ಕೈಗಾರಿಕಾ ಘಟಕಗಳು ಉಷ್ಣ ವಿದ್ಯುತ್ ಸ್ಥಾವರಗಳ ಮೇಲೆ ಅವಲಂಬಿತವಾಗಿದೆ.

ಈಗಷ್ಟೇ ಆರ್ಥಿಕ ಚೇತರಿಕೆ ಕಾಣುತ್ತಿರುವ ದೊಡ್ಡ ಕೈಗಾರಿಕ ಘಟಕಗಳು ಹಾಗು ಅತಿ ಹೆಚ್ಚು ವಿದ್ಯುತ್ ಶಕ್ತಿ ಮೇಲೆ ಅವಲಂಬಿತವಾಗಿರೋ ಆಸ್ಪತ್ರೆಗಳು, ಸಣ್ಣ ಕೈಗಾರಿಕೆಗಳು ಬಹಳ ಚಿಂತೆ ಪಡಬೇಕಾಗಿದೆ...

ಕೊರೊನ ಮಹಾಮಾರಿ ಸಮಯದಲ್ಲಿ ನಮ್ಮ ರಾಜ್ಯದಲ್ಲೇ ಕನ್ನಡಿಗರ ಶ್ರಮದಿಂದಲೇ ಉತ್ಪಾದಿಸಿದ ಆಮ್ಲಜನಕವನ್ನ ಕನ್ನಡಿಗರಿಗೆ ನೀಡದೆ ಒಕ್ಕೂಟ ಸರ್ಕಾರ ಅನ್ಯ ರಾಜ್ಯಗಳಲ್ಲಿ ಹಂಚೋಕೆ ಮುಂದಾಗಿತ್ತು ಇದಲ್ಲದೆ ಭೀಕರ ಪ್ರವಾಹ ಬಂದಾಗಲೂ 12ನೆ ಫೈನಾನ್ಸ್ commsion ಸೂಚನೆಯಂತೆ 75% ಪ್ರವಾಹಹಾನಿ ಹಣವನ್ನ ಕೊಡದೆ ಇರೋದು  ಗೊತ್ತಿಲ್ಲದ ಸಂಗತಿಯೇನಲ್ಲ.... ಕೊರೊನ ಬಿಕ್ಕಟ್ಟಿನಲ್ಲಿ ಹೇಗೆ ನಮ್ಮ ನಾಡಿನಲ್ಲೇ ನಮ್ಮ ಬೆವರಿನಿಂದಲೇ ಉತ್ಪಾದಿಸಿದ ಆಮ್ಲಜನಕವನ್ನ  ವಸಾಹುತ  ಧೋರಣೆಯಿಂದ ಕದ್ದಿ ಅನ್ಯರಾಜ್ಯಗಳಿಗೆ ಹಂಚಿದರೊ ಅದೇ ರೀತಿ ನಮ್ಮ ನಾಡಿನಲ್ಲಿ ಉತ್ಪಾದಿಸಿದ  ಇಂಧನವನ್ನ ಸಾಮ್ರಾಜ್ಯಶಾಹಿ ಒಕ್ಕೂಟ ತಮ್ಮ ವೈಕ್ತಿಕ ಉಪಯೋಗಕ್ಕೆ ಕದ್ದರೆ.
 ಆಶ್ಚರ್ಯವೇನಿಲ್ಲ...

Comments

Popular posts from this blog

ಬಿ ಬಿ ಎಂ ಪಿ ಚುನಾವಣೆ ಯಾವಾಗ ???

PR ಬೊಮ್ಮಾಯಿಯ ನೂರು ದಿನದ ವೈಫಲ್ಯ ಯಶೋಗಾಥೆ.

ಹೊರರಾಜ್ಯದವರ ಅಕ್ರಮ ಚಟುವಟಿಕೆಗಳಿಗೆ ಕರ್ನಾಟಕ ತಾಣವಾಗುತ್ತಿದೆಯೆ???