ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಏನಾಗುತ್ತಿದೆ ಸಂಚಿಕೆ -೧
ಬಹುಶಃ ಕನ್ನಡಿಗರಿಗೆ ತಮ್ಮ ನಾಡಿನ ಇತಿಹಾಸ, ಸಂಸ್ಕೃತಿ ಆಧ್ಯಾತ್ಮ ಪರಂಪರೆಯ ಪರಿಚಯ "ಕನ್ನಡ ವಿಶ್ವವಿದ್ಯಾಲಯ ಹಂಪಿ" ಮಾಡಿ ಕೊಟ್ಟಷ್ಟು ಯಾವ ವಿಶ್ವವಿದ್ಯಾಲಯವು ಅದರ ಅರ್ಧ ಕೆಲಸವನ್ನು ಸಹ ಮಾಡಿರಲಿಕ್ಕಿಲ್ಲ.
ಅಸಲಿಗೆ ಇತ್ತೀಚಿಗೆ ಯೂಟ್ಯೂಬ್ ಹಾಗೂ ಪತ್ರಿಕೆಗಳಲ್ಲಿ ನಮ್ಮ ನಾಡಿನ ಕಳೆದುಹೋದ ಇತಿಹಾಸವನ್ನ ಪರಿಚಯ ಮಾಡಿಕೊಡುವ ಕೆಲ ಕಂಟೆಂಟ್ ಮೇಕರ್ಸ್, ಅಂಕಣಕಾರರು ಈ ವಿಶ್ವವಿದ್ಯಾಲಯ ಪ್ರಕಟಿಸುವ ಹೊತ್ತಿಗೆಗಳ ಆಧಾರದ ಮೇಲೆಯೇ... ಮಾತಾಡುತ್ತಾರೆ ಬರೆಯುತ್ತಾರೆ
ವಿಶ್ವವಿದ್ಯಾಲಯಾಗಳು ಓಂದು ಸಮಾಜವನ್ನ,ದೇಶವನ್ನ ನಿರ್ಮಿಸುವ ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ವಹಿಸುತ್ತಲು ಇವೆ ಕೂಡ
ದೇಶಕ್ಕೆ ನಿರಂತರವಾಗಿ ಉತ್ತಮ ಕೊಡುಗೆಗಳನ್ನ ನೀಡುತ್ತಿರೋ ಜಿ. ಎನ್. ಯು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ "ದೇಶದ್ರೋಹಿಗಳನ್ನ ಉತ್ಪಾದಿಸೋ ಉಗ್ರಾಣ ಜೆ ಎನ್ ಯು ವಿಶ್ವವಿದ್ಯಾಲಯ" ಎಂಬ ಹಣೆಪಟ್ಟಿ ಇದೆ.
ಅದರ ಮಾಜಿ ವಿದ್ಯಾರ್ಥಿಗಳು ನಮ್ಮ ವಿತ್ತ ಹಾಗೂ ವಿದೇಶಾಂಗ ಸಚಿವ್ರು ಎಂಬುದನ್ನ ನಾವು ಮರೆಯಬಾರದು.
ಇನ್ನ ಹಂಪಿ ವಿಶ್ವವಿದ್ಯಾಲಯ ಕಾಲ್ಪನಿಕವಲ್ಲದ ಕೃತಿಗಳ ರಚನೆಗೆ ಹೆಸರು ವಾಸಿ.
ನಾಡೋಜ ಎಂ ಎಂ ಕಲ್ಬುರ್ಗಿ ಉಪ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು ಹಲವಾರು ಕೃತಿಗಳನ್ನ ರಚಿಸಿದ್ದರು.
ಕರ್ನಾಟಕದ ನಾಥ ಪರಂಪರೆ, ಸೂಫಿ ಹಾಗೂ ಹಲವು ಕೃತಿಗಳನ್ನ ರಚಿಸಿರುವ ರಹಮತ್ ತರೀಕೆರೆ ಇಲ್ಲೇ ತಮ್ಮ ಅಧ್ಯಯನ ನಡೆಸಿದ್ದರು.
ಇದಲ್ಲದೆ ಹಲವಾರು ಸಂಶೋಧನಾ ಕೆಲಸಗಳು ಇಲ್ಲಿ ನಡೆಯುತ್ತಿತ್ತು.
ಅಷ್ಟಕ್ಕೂ ಯಾವುದೇ ಮುಖ್ಯ ಸುದ್ದಿ ವಾಹಿನಿಗಳಲ್ಲೂ ಕನ್ನಡ ವಿಶ್ವವಿದ್ಯಾಲಯದಲ್ಲಿ ಏನಾಗುತ್ತಿದ್ದೆ?
ಕನ್ನಡ ಕುಲಕ್ಕೆ ಸಂಬಂಧಪಟ್ಟ ಹಲವು ಅಧ್ಯಯನ ಪೀಠಕ್ಕೆ ಅಧ್ಯಯನ ಎತ್ತ ಸಾಗುತ್ತಿದೆ ?
ನಿಧಾನವಾಗಿಯಾದರು ಸಾಕು ಶಾಶ್ವತವಾಗಿ ಕನ್ನಡದ ಕೆಲಸವನ್ನ ಮುಗಿಸಬೇಕು ಎಂಬ ಹುನ್ನಾರವ ?
ಯಾಕೆ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ? ಎಂಬ ಒಂದು ಸಣ್ಣ ವಿಚಾರದ ಪ್ರಸ್ತಾಪ ಇಲ್ಲ.
Comments
Post a Comment